ಕಾಲಟಿ

 ಅದ್ವೈತ ತತ್ತ್ವಶಾಸ್ತ್ರ ಪ್ರತಿಪಾದಕ ಭಗವಾನ್ ಶಂಕರಾಚಾರ್ಯರ ಜನ್ಮಸ್ಥಳ. ಕಾಲಡಿಯೆಂದೂ ಕರೆಯುತ್ತಾರೆ. ಕೇರಳ ರಾಜ್ಯದಲ್ಲಿ ಕೊಚ್ಚಿನ್ ಶೋರನೂರು ರೈಲ್ವೆ ಮಾರ್ಗದಲ್ಲಿರುವ ಆಳ್ವಾಯ್ ರೈಲ್ವೆ ನಿಲ್ದಾಣದಿಂದ ಈ ಗ್ರಾಮ ಐದಾರು ಮೈಲಿ ದೂರಲ್ಲಿ, ಪೆರಿಯಾರ್ ನದಿಯ ದಡದ ಮೇಲಿದೆ. ಇಲ್ಲಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿರುವ ಶ್ರೀಕೃಷ್ಣ, ಶಾರದಾಂಬ ಮತ್ತು ಶ್ರೀಶಂಕರ ದೇವಾಲಯಗಳಿವೆ. ಆದಿ ಶಂಕರರ ತಾಯಿ ಆರ್ಯಾಂಬ ಅವರ ಸಮಾಧಿಯಿದೆ. ಇಲ್ಲಿ ಶಂಕರ ಜಯಂತಿಯಂದು ದೊಡ್ಡ ಜಾತ್ರೆ ನಡೆಯುತ್ತದೆ. ವಡಕ್ಕಿ ನಾದರ್ ದೇವಾಲಯದ ಬಳಿಯಲ್ಲಿ ಶೃಂಗೇರಿ ಮಠದವರು ಸಂಸ್ಕøತ ಕಾಲೇಜು ಒಂದನ್ನು ಸ್ಥಾಪಿಸಿದ್ದಾರೆ. ಯಾತ್ರಾರ್ಥಿಗಳಾಗಿ ಬಂದವರು ತಂಗಲು ಅನೇಕ ಧರ್ಮ ಶಾಲೆಗಳಿವೆ.  

 (ಬಿ.ಎಸ್.ಪಿ.; ಎಸ್.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ